ಸರೋಜ ಹೆಗ್ಡೆ ತಮ್ಮನ್ನು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಂಥ ಉತ್ತಮ ಕಲಾವಿದೆ. ೧೯೬೦, ಡಿಸೆಂಬರ್ ೪ರಂದು ಜನಿಸಿದ ಸರೋಜ ಅವರ ತಂದೆಯವರ ಹೆಸರು ಮಂಜುನಾಥ್ ಹೆಗ್ಡೆ. ಎಸ್ ಎಸ್ ಎಲ್ ಸಿಯವರೆಗೆ ವಿದ್ಯಾಭಾಸ ಮಾಡಿದ ಸರೋಜ ಅವರು ಯುತ್ ಸರ್ವೀಸ್ ನಲ್ಲಿ ತರಬೇತು ಪಡೆದಿರುವರಲ್ಲದೆ, ನೀನಾಸಂ ಪದವಿಧರರು ಹಾಗೂ ಒಂದು ವರ್ಷ ನೀನಾಸಂ ತಿರುಗಾಟದಲ್ಲಿ ಭಾಗವಹಿಸಿದವರು. ೧೯೯೦ರಿಂದ ಮೈಸೂರಿನ ರಂಗಾಯಣದಲ್ಲಿ ರಂಗಸೇವೆ ಸಲ್ಲಿಸುತ್ತಿರುವ ಸರೋಜ ಹೆಗ್ಡೆಯವರು ನಟಿಯಾಗಿ, ವಸ್ತ್ರವಿನ್ಯಾಸಕಿಯಾಗಿ, ಗಾಯಕಿಯಾಗಿ, ನಾಟಕಕಾರ್ತಿಯಾಗಿ, ನಿರ್ದೇಶಕಿಯಾಗಿ ಮತ್ತು ತಂಡದ ನಿರ್ವಾಹಕಿಯಾಗಿ, ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿ, ಸಮರ್ಥವಾಗಿ ಎಲ್ಲ ವಿಭಾಗದಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಇವರ ಪತಿ ಖ್ಯಾತ ರಂಗಕರ್ಮಿ ಮಂಡ್ಯ ರಮೇಶ್ ಅವರು. ಮುದ್ದಾದ ಒಬ್ಬ ಮಗಳಿದ್ದಾಳೆ ಸರೋಜ-ರಮೇಶ್ ದಂಪತಿಗಳಿಗೆ. == ಅಭಿನಯಿಸಿದ ಕೆಲವು ಮುಖ್ಯ ನಾಟಕಗಳು-ಪಾತ್ರಗಳು == ಮ್ಯಾಕ್‍ಬೆತ್ -ಪಾತ್ರ: ಲೇಡಿ ಮ್ಯಾಕ್‍ಬೆತ್ ಹ್ಯಾಮ್ಲೆಟ್ -ಪಾತ್ರ: ಒಫಿಲಿಯಾ ಒಥೆಲೊ -ಪಾತ್ರ: ಎಮಿಲಿಯಾ ಲೋವರ್ ಡೆಪ್ತ್ಸ್ -ಪಾತ್ರ: ಯುವ ಪ್ರೇಮಿ (ಎ ಯಂಗ್ ಲವರ್) ಚೆರ್ರಿ ಆರ್ಚೆರ್ಡ್ -ಪಾತ್ರ: ಆನ್ಯಾ ಹಿಪ್ಪೋಲಿಟಸ್ -ಪಾತ್ರ: ಪ್ರೇಮದೇವತೆ (ಗಾಡೆಸ್ ಆಫ್ ಲವ್) ಕಿಂದರ ಜೋಗಿ -ಪಾತ್ರ: ಹಳ್ಳಿ ಹೆಣ್ಣು ತಲೆದಂಡ -ಪಾತ್ರ: ಗಂಗಾಂಬಿಕೆ ಸಿರಿಸಂಪಿಗೆ -ಪಾತ್ರ: ರಾಜಕುಮಾರಿ ಚಂದ್ರಹಾಸ -ಪಾತ್ರ: ವಿಷಯೆ ಮಗ್ಗದವರು -ಪಾತ್ರ: ಯಜಮಾನನ ಹೆಂಡತಿ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ -ಪಾತ್ರ: ನಾಯಕಿ ಗಾಂಧಿ ವರ್ಸಸ್ ಗಾಂಧಿ -ಪಾತ್ರ: ಗಾಂಧಿಜೀಯ ಸೊಸೆ ಅಗ್ನಿವರ್ಣ -ಪಾತ್ರ: ಮುಖ್ಯಪಾತ್ರ ಪ್ರತಿಶೋಧ -ಪಾತ್ರ: ನಾಯಕಿ ಗುಣಮುಖ -ಪಾತ್ರ: ಸೇವಕಿ ಅಲೆಗಳಲ್ಲಿ ರಾಜಹಂಸ -ಪಾತ್ರ: ಸುಂದರಿ ಸರ್ವಂಟ್ ಆಫ್ ಟು ಮಾಸ್ಟರ್ಸ್ -ಪಾತ್ರ: ಕಲಾವತಿ ಪೋಲಿಕಿಟ್ಟಿ -ಪಾತ್ರ: ಪುಟ್ನಂಜಿ ಕದಡಿದ ನೀರು -ಪಾತ್ರ: ಪಾರ್ವತಿ ಕಿಂಗ್ ಲಿಯರ್ -ಪಾತ್ರ: ಕಾರ್ಡಿಲಿಯಾ ಮಂಜುಳಾ -ಪಾತ್ರ: ಮಂಜುಳಾ ಸುಬ್ಬಾ ಭಟ್ಟರ ಮಗಳು -ಪಾತ್ರ: ಸುಬ್ಬುನ ಮಗಳು ಚಿರಾಬಂಧಿ ವಾಡೆ -ಪಾತ್ರ: ಅತ್ತಿಗೆ ಮಲೆಗಳಲ್ಲಿ ಮದುಮಗಳು (೯ ಗಂಟೆಯ ನಾಟಕ) -ಪಾತ್ರ: ನಾಗತ್ತೆ ಮತ್ತು ರಂಗಮ್ಮ ಸದಾರಮಾ ನಾಟಕಂ -ಪಾತ್ರ: ಸದಾರಮೆ ಗೋರ -ಪಾತ್ರ: ಚಿಕ್ಕಮ್ಮ (ಆಂಟ್) ಏನ್ ಹುಚ್ಚೂರಿ, ಯಾಕಿಂಗಾಡ್ತೀರಿ -ಪಾತ್ರ: ಮಹಾರಾಣಿ ಬೂರ್ಜ್‍ವಾ ಜಂಟಲ್ ಮನ್ -ಪಾತ್ರ: == ಸರೋಜ ಹೆಗ್ಡೆ ಅವರು ಅಭಿನಯಿಸಿದ ಕೆಲವು ನಾಟಕದ ಭಾವಚಿತ್ರಗಳು == == ರಾಷ್ಟ್ರೀಯ ಮತ್ತು ಅಂತರ‍್ರಾಷ್ಟ್ರೀಯ ಖ್ಯಾತಿಯುಳ್ಳ ಈ ನಿರ್ದೇಶಕರೊಡನೆ ಕೆಲಸ ಮಾಡಿದ್ದಾರೆ ==  . ()  . ()  . . . . ()  . ()  . . . , . . .  . , . . .,  . . . ( )  . , . . .  . , . . .  . , . . .  . , . . .  . , . . .  . , . . .  . . . , . . .  . , . . .  . . . .  . . .  . . . , . . .  . .  . . . . ನಿರ್ದೇಶಕಿಯಾಗಿ ಸರೋಜ ಹೆಗ್ಡೆಯವರು, ’ಮೃಚ್ಛಕಟಿಕ, ಮಿಡ್ ಸಮ್ಮರ್ ನೈಟ್ ಡ್ರೀಮ್ಸ್, ಕಣ್ಣಾ ಮುಚ್ಚೆ ಕಾಡೆಗೂಡೆ ಹಾಗೂ ಅಸಂಖ್ಯಾತ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಾಟಕ ಸಂಚಾರದಲ್ಲಿ ಇಡೀ ಭಾರತದಲ್ಲಿ ಹಲವಾರು ಕಡೆ ಅಭಿನಯಿಸಿದ್ದಲ್ಲದೆ, ಅಮೇರಿಕ, ಜರ್ಮನಿ ಮತ್ತು ಆಸ್ಟ್ರೀಯದಲ್ಲೂ ಸುತ್ತಾಡಿ ತಮ್ಮ ಅಭಿನಯ ಪ್ರೌಢಿಮೆ ಮೆರೆದಿದ್ದಾರೆ.